Actress Deepika Padukone: ದೀಪಿಕಾ ಪಡುಕೋಣೆ ಹೊರತುಪಡಿಸಿ, ಕಮಲ್ ಹಾಸನ್ ಅವರು 'ಕಲ್ಕಿ 2898 AD' ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಈ ಮಧ್ಯೆ, ಸಂದರ್ಶನವೊಂದರಲ್ಲಿ ನಟ ದೀಪಿಕಾ ಪಡುಕೋಣೆ ಅವರ ಮಗುವಿನ ಭವಿಷ್ಯ ನುಡಿದಿದ್ದಾರೆ.  


COMMERCIAL BREAK
SCROLL TO CONTINUE READING

ದೀಪಿಕಾ ಪಡುಕೋಣೆ ಅವರ ಮಗು ದೊಡ್ಡವನಾದಾಗ ಸಿನಿಮಾ ಮೇಕರ್ ಆಗಬಹುದು ಎಂದು ಕಮಲ್ ಹಾಸನ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ, ನಟ ದೀಪಿಕಾ ಅವರ ಮಗುವಿನ ಬಂಪ್ ಕಡೆಗೆ ತೋರಿಸಿ, 'ಅದಕ್ಕಾಗಿಯೇ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈ ಮಗುವೂ ಒಂದು ದಿನ ಸಿನಿಮಾ ಮಾಡುವಂತಾಗಲಿ ಎಂದು ಹಾರೈಸುತ್ತೇವೆʼ ಎಂದು ಕಮಲ್ ಹಾಸನ್ ಹೇಳಿದ್ದಾರೆ.   


ಇದನ್ನೂ ಓದಿ-ನಾಲ್ಕು ತಲೆಮಾರಿನ ಕಥೆ ಹೇಳುವ ‘ಮಾನ್’ಸ್ಟರ್’ ಟೀಸರ್-ಹಾಡು ಬಿಡುಗಡೆ


ಫೈಟರ್ ಚಿತ್ರದ ನಂತರ ದೀಪಿಕಾ ಪಡುಕೋಣೆ ತಮ್ಮ ಗರ್ಭಧಾರಣೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ತನ್ನ ಹೆರಿಗೆಯಾಗಲಿದೆ ಎಂದು ನಟಿ ಹೇಳಿದ್ದರು. ಆದರೆ, ದೀಪಿಕಾ ಪಡುಕೋಣೆ ಅವರ ಬೇಬಿ ಬಂಪ್ ಕಾಣಿಸದ ಕಾರಣ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ದೀಪಿಕಾ ತಾಯಿಯಾಗುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಬಳಿಕ ನಟಿ ಸ್ವತಃ ತನ್ನ ಬೇಬಿ ಬಂಪ್‌ನ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಟ್ರೋಲ್‌ಗಳನ್ನು ಬಾಯಿ ಮುಚ್ಚಿಸಿದ್ದರು.. 


ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ 'ಕಲ್ಕಿ 2898 AD' ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಚಿತ್ರದಲ್ಲಿ ನಟಿ ಗರ್ಭಿಣಿ ಮಹಿಳೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಮಿತಾಬ್ ಬಚ್ಚನ್ ಅಮರ ಯೋಧ ಅಶ್ವತ್ಥಾಮ ಪಾತ್ರದಲ್ಲಿ, ಮತ್ತು ದಿಶಾ ಪಟಾನಿ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ-“ಈಕೆಯ ಮಗುವಾಗಿ ಮರುಜನ್ಮ ಪಡೆಯುವೆ”- ರಾಮಚಂದ್ರ ಗುರೂಜಿ ಬಳಿ ಮಾತನಾಡಿದ ಪುನೀತ್ ರಾಜ್ ಕುಮಾರ್ ಆತ್ಮ ಹೇಳಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.